ಶ್ರೀ ವಜ್ರೇಶ್ವರಿ ಹಾಸ್ಪಿಟಾಲಿಟೀಸ್ ಲಾಂಛನದಡಿಯಲ್ಲಿ ಡಾ|| ರಾಜ್ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಗುರುರಾಜ್ಕುಮಾರ್ ನಿರ್ಮಿಸುತ್ತಿರುವ ರನ್ ಆಂಟನಿ ಚಿತ್ರದ ಚಿತ್ರೀಕರಣವು ಈಗ ನಗರದಲ್ಲಿ ಭರದಿಂದ ಸಾಗಿದೆ.
ಚಿತ್ರಕ್ಕಾಗಿ ವಿನಯ್ ರಾಜ್ಕುಮಾರ್, ರುಕ್ಷರ್ಮೀರ್, ಶಿವಾಜಿರಾವ್ಜಾಧವ್ರವರು ಅಭಿನಯಿಸಿದ ಹಲವಾರು ಸನ್ನಿವೇಶನಗಳನ್ನು ಮನೋಹರ್ ಜೋಷಿ ಛಾಯಾಗ್ರಹಣದಲ್ಲಿ ನಗರದ ಸುತ್ತಮುತ್ತ ನಿರ್ದೇಶಕ ರಘುಶಾಸ್ತ್ರಿ ಚಿತ್ರೀಕರಿಸಿಕೊಂಡರು.
ಚಿತ್ರದ ಚಿತ್ರೀಕರಣವು ಒಂದೇ ಹಂತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆ ಹರಿಪರಾಕ್ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ, ಮುರುಳಿ ನೃತ್ಯ, ಮಾಸ್ಮಾದ ಸಾಹಸ, ಮಲ್ಲಿಕಾರ್ಜುನ್ ನಿರ್ಮಾಣ ನಿರ್ವಹಣೆ, ಚನ್ನ ನಿರ್ಮಾಣ ಮೇಲ್ವಿಚಾರಣೆ, ಎಸ್.ಕೆ. ಸಂತೋಷ್ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ರಘುಶಾಸ್ತ್ರಿ.
ತಾರಾಗಣದಲ್ಲಿ ವಿನಯ್ರಾಜ್ಕುಮಾರ್, ರುಕ್ಷರ್ಮೀರ್, ಸುಶ್ಮಿತಾ ಜೋಷಿ, ಶ್ರೀಧರ್ ಕೆ.ಎಸ್. ಶಿವಾಜಿರಾವ್ ಜಾಧವ್ ಮುಂತಾದವರಿದ್ದು ಮತ್ತಷ್ಟು ತಾರಾಬಳಗದ ಆಯ್ಕೆ ಈಗ ನಡೆದಿದೆ.